ಭರೂಚ್, ಅ 10 (DaijiworldNews/HR): ನಗರ ನಕ್ಸಲರು ಹೊಸ ರೂಪದೊಂದಿಗೆ ಗುಜರಾತ್ ಪ್ರವೇಶಿಸಲು ಯತ್ನಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಗರ ನಕ್ಸಲರು ಹೊಸ ರೂಪದೊಂದಿಗೆ ಗುಜರಾತ್ ಪ್ರವೇಶಿಸಲು ಯತ್ನಿಸುತ್ತಿದ್ದಾರೆ. ಆದರೆ ಯುವಕರ ಜೀವನವನ್ನು ನಾಶ ಮಾಡಲು ರಾಜ್ಯದ ಜನರು ಅವಕಾಶ ನೀಡುವುದಿಲ್ಲ ಎಂದರು.
ಇನ್ನು ನಗರ ನಕ್ಸಲರು ತಮ್ಮ ಉಡುಗೆ, ತೊಡುಗೆಯನ್ನೂ ಬದಲಾಯಿಸಿಕೊಂಡಿದ್ದು, ನಗರ ನಕ್ಸಲರು ಅಮಾಯಕ ಯುವಕರ ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.
ನಾವು ನಮ್ಮ ಯುವ ಪೀಳಿಗೆಯ ಭವಿಷ್ಯ ಹಾಳಾಗಲು ಅವಕಾಶ ನೀಡಬಾರದು. ದೇಶವನ್ನು ನಾಶ ಮಾಡಲು ಯತ್ನಿಸುತ್ತಿರುವ ನಗರ ನಕ್ಸಲೀಯರ ಬಗ್ಗೆ ಮಕ್ಕಳಿಗೆ ಎಚ್ಚರಿಕೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.