ಬೆಳಗಾವಿ, ನ 08 (DaijiworldNews/HR): ಹಿಂದೂ ಪದದ ಕುರಿತು ವಿವಾದಿತ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೆ ಓದಿದ್ದಾರೆ. ಹಿಂದೂ ಶಬ್ದ ಪರ್ಶಿಯನ್ ಶಬ್ದ ಅದಕ್ಕೆ ದಾಖಲೆ ಇದೆ ವಿಕಿಪೀಡಿಯಾದಲ್ಲಿ ನೋಡಬಹುದೆಂದು ಹೇಳಿದ್ದೇನೆ. ಅಲ್ಲದೆ ತಾನು ಹೇಳಿದ್ದು ತಪ್ಪೆಂದು ಸಾಬೀತು ಮಾಡಿದರೆ ಕ್ಷಮೆ ಮಾತ್ರವಲ್ಲ, ರಾಜೀನಾಮೆ ಕೊಡಲು ಸಿದ್ದ ಎಂದಿದ್ದಾರೆ.
ಇನ್ನು ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿದೆ, ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದ್ದು. ನಾನು ಇದರ ಬಗ್ಗೆ ಚರ್ಚೆಯಾಗಬೇಕೆಂದು ಹೇಳಿದ್ದೇನೆ. ಅಶ್ಲೀಲವಾಗಿ ಅಂತಾ ಇದ್ದಿದ್ದು ಆ ಡಿಕ್ಷನರಿಯಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡರು.