ಆಂಧ್ರಪ್ರದೇಶ, ನ 15 (DaijiworldNews/HR): ನಟ ರಿಷಬ್ ಶೆಟ್ಟಿ ನಟನೆಯ, ನಿರ್ದೇಶನದ 'ಕಾಂತಾರ' ಸಿನಿಮಾದ ಗೆಟಪ್ನಲ್ಲಿ ಆಂಧ್ರಪ್ರದೇಶದಲ್ಲಿ ತಹಶೀಲ್ದಾರೊಬ್ಬರು ಕಾಣಿಸಿಕೊಂಡಿದ್ದು, ಡೈಲಾಗ್ ಹೇಳಿರುವ ಘಟನೆ ನಡೆದಿದೆ.
ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದಾರೆ. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಅವರು 'ಕಾಂತಾರ' ಸಿನಿಮಾದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಆ ಸಿನಿಮಾದ ಡೈಲಾಗ್ ಕೂಡ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ತಹಶೀಲ್ದಾರ್ ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದ್ದು, ಈ ಕಾರ್ಯಕ್ರಮಕ್ಕೆ 'ಕಾಂತಾರ' ಚಿತ್ರದ ರೀತಿ ವೇಷ ಹಾಕಿಕೊಂಡು ಬಂದಿದ್ದರು. ಅವರನ್ನು ಕಂಡು ಅನೇಕ ಮಂದಿಗೆ ಆಶ್ಚರ್ಯವಾಗಿದ್ದು, ತಹಶೀಲ್ದಾರ್ ಜೊತೆ ಕೆಲವರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.