ಬೆಂಗಳೂರು, ನ 17 (DaijiworldNews/MS): ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಸತತ 10 ವರ್ಷದ ಛಲ ಬಿಡದೆ ಗೂಗಲ್ನಲ್ಲಿ ಕೆಲಸ ಪಡೆಯುವ ಕನಸು ನನಸು ಮಾಡಿಕೊಂಡಿದ್ದಾರೆ.
ಅಡ್ವಿನ್ ರಾಯ್ ನೆಟ್ಟೊ 2013ರಿಂದ ಅರ್ಜಿ ಹಾಕುತ್ತಿದ್ದರೂ, ಪ್ರತಿವರ್ಷ ರೆಸ್ಯೂಮ್ ರಿಜೆಕ್ಟ್ ಆಗುತ್ತಿತ್ತು. ಛಲ ಬಿಡದೆ ಸಿವಿಯನ್ನು ಅಪ್ಡೇಟ್ ಮಾಡಿ ಕಳುಹಿಸುತ್ತಿದ್ದರು.
ಕೊನೆಗೂ ಗೂಗಲ್ನಲ್ಲಿ UXಡಿಸೈನರ್ ಆಗಿ ನೇಮಕವಾಗಿದ್ದು, ಆ ಖುಷಿ ಹಾಗೂ ಸ್ಪೂರ್ತಿದಾಯಕ ಕಥೆಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್ಗಳಲ್ಲಿ ಸುಮಾರು 12 ವರ್ಷಗಳ ಅನುಭವವನ್ನು ಹೊಂದಿರುವ ನೆಟ್ಟೊ, 2013 ರಿಂದ ತನ್ನ ಕನಸಿನ ಕೆಲಸಕ್ಕಾಗಿ ಪ್ರತಿ ವರ್ಷ ಗೂಗಲ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದ್ದು ಅಂತಿಮವಾಗಿ ಅವರು ಕಷ್ಟಪಟ್ಟು ಸಂದರ್ಶನವನ್ನು ಬೇಧಿಸಿ ತಮ್ಮ ಗೂಗಲ್ ನಲ್ಲಿ ಕೆಲಸ ಮಾಡುವ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಗೂಗಲ್ನಲ್ಲಿ ಕೆಲಸ ಮಾಡಿದರೆ ಕೋಟ್ಯಂತರ ಜನರ ಸಮಸ್ಯೆಗೆ ಸ್ಪಂದಿಸಬಹುದೆಂಬುದು ಅಡ್ವಿನ್ ರಾಯ್ ನೆಟ್ಟೊ ಆಸೆಯಾಗಿತ್ತು.