ಕೋಲ್ಕತಾ, ಡಿ 9 (DaijiworldNews/HR): ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ನ ಅವಳಿ ಸಹೋದರಿಯರಾದ ಅರ್ಪಿತಾ ಮತ್ತು ಪರಮಿತಾ ಅವರು ಅವಳಿ ಸಹೋದರರಾದ ಲವ್ ಮತ್ತು ಕುಶ್ ಅವರೊಂದಿಗೆ ಮದುವೆಯಾಗಿದ್ದು, ಇವರ ಪೊಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಿಕ್ಕವರಿರುವಾಗಿನಿಂದಲೂ ಅರ್ಪಿತಾ ಮತ್ತು ಪರಮಿತಾ ಒಟ್ಟಿಗೆ ಇದ್ದು ಸಹೋದರಿಯರು ಎಂದಿಗೂ ಬೇರೆಯಾಗಿರಲಿಲ್ಲ. ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅದೇ ಕಾಲೇಜಿಗೆ ಹೋಗುತ್ತಿದ್ದರು. ಅವಳಿ ಸಹೋದರರನ್ನು ಮದುವೆಯಾಗುವುದು ಅವರ ಆಸೆಯಾಗಿತ್ತು. ತಮ್ಮ ಮಕ್ಕಳ ಆಸೆಯನ್ನು ತಂದೆ-ತಾಯಿ ಈಡೇರಿಸಿದ್ದಾರೆ.
ಇನ್ನು ಕಾಕತಾಳೀಯವೆಂಬಂತೆ ಅವಳಿ ಹುಡುಗರ ಕುಟುಂಬವೂ ಅವಳಿ ವಧುಗಳನ್ನು ಹುಡುಕುತ್ತಿದ್ದು, ಇದೀಗ ಜೋಡಿಗಳು ಮದುವೆಯಾಗಿದ್ದಾರೆ.