ನವದೆಹಲಿ, ಮಾ 21 (DaijiworldNews/DB): ದೆಹಲಿ ಸರ್ಕಾರದ ಬಜೆಟ್ ಮಂಡನೆಗೆ ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಅನುಮೋದನೆ ನೀಡಿದೆ.
ಕೇಂದ್ರವು ಬಜೆಟ್ಗೆ ಅನುಮೋದನೆ ನೀಡಿರುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಕಚೇರಿ ಮೂಲಗಳು ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ. ಇನ್ನು ಸರ್ಕಾರದ ವೈಫಲ್ಯ ಮುಚ್ಚಿಡುವುದಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ದೆಹಲಿ ರಾಜ್ಯವಲ್ಲ, ಅದು ಕೇಂದ್ರಾಡಳಿತ ಪ್ರದೇಶ. ಹೀಗಾಗಿ ಭಾರತ ಸರ್ಕಾರದ ಅಂಗವಾಗಿದ್ದು, ಬಜೆಟ್ನ್ನು ಸರ್ಕಾರ ತಡೆ ಹಿಡಿದಿಲ್ಲ ಎಂದೂ ವಿ.ಕೆ. ಸಕ್ಸೇನಾ ಅವರ ಕಚೇರಿ ಸ್ಪಷ್ಟಪಡಿಸಿದೆ.
ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆಗೆ ಇಂದು ದಿನಾಂಕ ನಿಗದಿಯಾಗಿತ್ತು.