ಉಡುಪಿ, ಜ 02 (DaijiworldNews/HR): ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸುಮಾರು ಏಳರಿಂದ 10 ಮಂದಿಯ ತಂಡವು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಬಂದು ರಸ್ತೆಯ ಮದ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಘಟನೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಮತ್ತು ಕಾಯಿನ್ ಸರ್ಕಲ್ ನಡುವಿನ ವಿಎಸ್ ಆಚಾರ್ಯ ರಸ್ತೆಯಲ್ಲಿ ಡಿ.31ರ ಮಧ್ಯರಾತ್ರಿ ನಡೆದಿದ್ದು ಆರೋಪಿಗಳ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಪ್ರಯುಕ್ತ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ ಸಿ ಅವರು ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ 7 ರಿಂದ 10 ಜನರ ತಂಡವೊಂದು ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡಿಕೊಂಡು ಬಂದಿದ್ದು, ರಾಯಲ್ ಎನ್ ಫೀಲ್ಡ್ ಬೈಕ್ ಸವಾರ ಸೈಲೆನ್ಸರ್ ನಲ್ಲಿ ಬೆಂಕಿಯ ಕಿಡಿ ಬರುವ ರೀತಿಯಲ್ಲಿ ನಿರ್ಲಕ್ಷ್ಯತೆಯಿಂದ ಚಾಲನೆ ಮಾಡಿಕೊಂಡು ಇತರೆ ವಾಹನಗಳ ಸವಾರರ ಜೊತೆ ಬಂದು ರಸ್ತೆಯ ಮದ್ಯದಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಬೊಬ್ಬೆಯೊಡೆದು ಕುಣಿದು ಕುಪ್ಪಳಿಸುತ್ತಾ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ಸಾರ್ವಕನಿಕರಿಗೆ ತೊಂದರೆ ಉಂಟುಮಾಡಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.